New & Upcoming

RSS feed for this category

Posts and Opinions from other Indian blogs.

0 Vote

ಹಾಡೊಂದರ ಹುಟ್ಟು

ಹಾಡು ಹುಟ್ಟಲು ಇಂಥ ದಿನ, ಘಳಿಗೆ ಮುಹೂರ್ತ ಎನ್ನುವುದು ಇಲ್ಲ. ಕವಿಯ ಕಣ್ಣು ಎಲ್ಲಿದ್ದರು ಸೌಂದರ್ಯವನ್ನು ಹುಡುಕಿಯೇ ತೀರುತ್ತದೆ. ’ಒಲವೇ ಮರೆಯದ ಮಮಕಾರ’ ಎಂದು ನಂಬುವ ಬ್ಲಾಗಿಗ ಮಣಿಕಾಂತ್ ಚಂಬಲ್ ಕಣಿವೆಯಂಥ ಪ್ರದೇಶದಲ್ಲಿ ಹುಟ್ಟಿದ ಗೀತೆಯೊಂದರ ಬಗ್ಗೆ ಸ್ವಾರಸ್ಯಕರವಾಗಿ ಬರೆದಿದ್ದಾರೆ.

“ಈ ಮರುಳು ಮಾಡುವ ಹಾಡಿಗೂ, ಚಂಬಲ್ ಕಣಿವೆಗೂ ಎಲ್ಲಿಂದೆಲ್ಲಿಯ ಸಂಬಂಧ?ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಅದು ೧೯೭೭ರ ಜಮಾನಾ. ನಟ ಸಿ.ಆರ್. ಸಿಂಹ ನೇತೃತ್ವದ `ನಟರಂಗ’ಕ್ಕೆ ಕವಿ ಲಕ್ಷ್ಮೀನಾರಾಯಣ ಭಟ್ಟರು ಶೂದ್ರಕನ `ಮೃಚ್ಛಕಟಿಕ’ ನಾಟಕದ ಕನ್ನಡಾನುವಾದ ಮಾಡಿಕೊಟ್ಟಿದ್ದರು. ದಿಲ್ಲಿಯಲ್ಲಿ ನಡೆಯಲಿದ್ದ ಕನ್ನಡ ರಾಜ್ಯೋತ್ಸವದಲ್ಲೇ ನಾಟಕದ ಮೊದಲ ಪ್ರದರ್ಶನವೆಂದು ನಿರ್ಧಾರವಾಗಿತ್ತು. ನಾಟಕದ ಮೊದಲ ಪ್ರದರ್ಶನ, ಅದೂ ದೂರದ ದಿಲ್ಲಿಯಲ್ಲಿ ಅಂದಮೇಲೆ ಕೇಳಬೇಕೆ? `ನಟರಂಗ’ದ ಎಲ್ಲರಿಗೂ ಹಿಗ್ಗೋಹಿಗ್ಗು. ಸಿಂಹ ಅವರ ಸಾರಥ್ಯದಲ್ಲಿ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಿ. ಅಶ್ವತ್ಥ್, ಕವಿ ಲಕ್ಷ್ಮೀನಾರಾಯಣ ಭಟ್ಟರು-ಸೇರಿದಂತೆ ಒಟ್ಟು ನಲವತ್ತೈದು ಮಂದಿ ರೈಲಿನಲ್ಲಿ ದಿಲ್ಲಿಗೆ ಹೊರಟರು. ತಂಡದ ಎಲ್ಲ ಸದಸ್ಯರೂ ಒಂದೇ ಬೋಗಿಯಲ್ಲಿದ್ದರು. ಹಾಗಾಗಿ ತಿಂಡಿ-ತೀರ್ಥದ ಸಮಾರಾಧನೆ ಜೋರಾಗಿಯೇ ನಡೆಯುತ್ತಿತ್ತು. ನಾಟಕ ತಂಡದವರ ಹಾಡು-ಕುಣಿತ-ತಮಾಷೆ-ಕೇಕೆಯ ಮಧ್ಯೆಯೇ ಹಗಲು ಕಳೆದು ಕತ್ತಲಾಯಿತು. ಅದು ಬೆಳದಿಂಗಳ ರಾತ್ರಿ, ರೈಲು ಓಡುತ್ತಿದ್ದುದು ಚಂಬಲ್ ಕಣಿವೆಯಲ್ಲಿ…”

Comments

4 comments. Leave your comment »

rk
Jul 16th, 2008 at 7:06 pm | #

Hi! When you post articles in regional languages, it would be beneficial to put the title and the contributor’s note in English as well. That way if the article seems interesting, it will help us refer it to those who can read the script of the regional language. For example, I dont know kannada but my mum does. So if I knew what this post was about, I might have referred my mum it. Thanks!

rk
Jul 16th, 2008 at 7:07 pm | #

*referred my mum to it.

Tina
Jul 18th, 2008 at 5:34 am | #

Dear RK,
Thanks for the suggestion, have put it into action in my next post. Now you can refer your mom to this section!! :)
- Regards, Tina

rk
Jul 18th, 2008 at 11:52 am | #

That’s great..Thanks Tina! :)

← Previous post
Truly Indian?
Next post →
Indo-US Nuclear Deal for Dummies